ಭಾರತದ ಉದ್ದಗಲಕ್ಕೂ ಶಕ್ತಿ ಸ್ವರೂಪಿಣಿಯಾಗಿ, ಮಹಾಮಾಯೆಯಾಗಿ, ಮಹಿಷಾಸುರ ಮರ್ಧಿನಿಯಾಗಿ, ಜಗನ್ಮಾತೆಯಾಗಿ, ಜಗತ್ರಕ್ಷಕಿಯಾಗಿ ಈ ಪುಣ್ಯ ಭೂಮಿಯ ಜನಮಾನಸದಲ್ಲಿ ಶ್ರೀ ದುರ್ಗೆ ಅಚ್ಚಳಿಯದಂತೆ ನೆಲೆ ನಿಂತಿದ್ದಾಳೆ.
ಆತ್ಮೀಯ ಭಗವದ್ಭಕ್ತರೇ,
ಭಾರತದ ಭವ್ಯ ಸಾಂಸ್ಕೃತಿಕ ಸನಾತನ ಪರಂಪರೆಯಲ್ಲಿ ದೇವಾಲಯಗಳು ಸಾಮಾಜಿಕ ಹಾಗೂ ಧಾರ್ಮಿಕ ಶೃದ್ಧಾ ಕೇಂದ್ರಗಳಾಗಿವೆ. ದೇವರನ್ನು ಅಗೋಚರ ಶಕ್ತಿ ಎಂದು ಕರೆದು, ಭಯ-ಭಕ್ತಿ-ಶೃದ್ಧಾಭಾವಗಳಿಂದ ಪೂಜಿಸುವ ಪರಂಪರೆಯು ನಮ್ಮದ್ದಾಗಿದೆ. ಧಾರ್ಮಿಕ ಶೃದ್ಧಾ ಕೇಂದ್ರಗಳಾಗಿರುವ ದೇವಾಲಯಗಳು ನಮಗೆ ನೆಮ್ಮದಿ ಹಾಗೂ ಸುಖ:-ಶಾಂತಿಯನ್ನು ದೊರಕಿಸಿಕೊಡುವ ಶಕ್ತಿ ಕೇಂದ್ರವೂ ಆಗಿರುತ್ತದೆ. ಕರಾವಳಿ ಜಿಲ್ಲೆಗಳ ಸಂಸ್ಕೃತಿ, ಸಂಪ್ರದಾಯ, ರೀತಿ-ರಿವಾಜುಗಳ ಅನ್ವಯ ತಾವು ನಂಬಿಕೊಂಡು ಬಂದಿರುವ ದೈವದೇವರುಗಳ ಶಕ್ತಿಯನ್ನು ನಾನಾ ರೂಪಗಳಲ್ಲಿ ಆರಾಧಿಸುವ ಪರಂಪರೆಯು ನಮ್ಮಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುತ್ತದೆ.
ಶ್ರೀ ಮಹಾಗಣಪತಿ, ಶ್ರೀ ವೀರಭದ್ರ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪರಿವಾರ ಸಹಿತ ಶ್ರೀ ಭದ್ರಕಾಳಿ ಅಮ್ಮನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶ ಮಹೋತ್ಸವ ಹಾಗೂ ಅನ್ನಸಂತರ್ಪಣೆ
ಆಹ್ವಾನ ಪತ್ರ 1 ಆಹ್ವಾನ ಪತ್ರ 2